ಸರ್ಕಾರದ ಬೊಕ್ಕಸಕ್ಕೆ 12,228 ಕೋಟಿ ನಷ್ಟ: ಜನಾರ್ದನ ರೆಡ್ಡಿಗೆ 10ಸಾವಿರ ದಂಡ ಇಷ್ಟೇ ಸಾಕೇ?
ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಶಾಸಕ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಸರ್ಕಾರಕ್ಕೆ ಆದ ನಷ್ಟ ಬರೋಬ್ಬರಿ 884 ಕೋಟಿ ಎಂದು ಸಿಬಿಐ ವಾದಿಸಿತ್ತು.
ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೇತೃತ್ವದಲ್ಲಿ ನಡೆದ ತನಿಖೆಯ ವರದಿ ಪ್ರಕಾರ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಆದ ನಷ್ಟ 12,228 ಕೋಟಿ.
(ಕರ್ನಾಟಕದ 10, ಗೋವಾ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿಧ ಬಂದರುಗಳ ಮೂಲಕ ಅಕ್ರಮವಾಗಿ 2.98 ಕೋಟಿ ಟನ್ ಅದಿರು ರಫ್ತಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 12,228 ಕೋಟಿ ರೂ.ನಷ್ಟವಾಗಿದೆ (ಟನ್ಗೆ 4,103 ರೂ.ಲೆಕ್ಕಚಾರದಲ್ಲಿ) ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿತ್ತು)
ಸಚಿವ ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯ ಸಂಪುಟ ಉಪ ಸಮಿತಿಯ ವರದಿ ಪ್ರಕಾರ, ರಾಜ್ಯದ ರೈಲ್ವೇ ಸೈಡಿಂಗ್‌ಗಳಿಂದ ಅಕ್ರಮವಾಗಿ 35 ಕೋಟಿ ಟನ್ ಅದಿರು ಸಾಗಾಣಿಕೆಯಾಗಿದೆ. ಇದರಿಂದ ಆದ ನಷ್ಟದ ಮೊತ್ತ ಬರೋಬ್ಬರಿ 1.43 ಲಕ್ಷ ಕೋಟಿ ರೂಪಾಯಿ! ಈ ಸಮಿತಿಯ ವರದಿ ಕುರಿತು ʻದಿ ಫೈಲ್ʼ ವಿವರವಾದ ವರದಿ ಪ್ರಕಟಿಸಿತ್ತು.
ಜನಾರ್ಧನ ರೆಡ್ಡಿ 2016 ರಲ್ಲಿ ನಡೆದ ತಮ್ಮ ಮಗಳ ಮದುವೆಗೆ ಮಾಡಿದ ಖರ್ಚು 62.55 ಕೋಟಿ ರೂ.
ಇಂದು ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ ರೆಡ್ಡಿಗೆ ವಿಧಿಸಿದ್ದು 7 ವರ್ಷ ಜೈಲು ಶಿಕ್ಷೆ ಮತ್ತು 10,000 ರೂ. ದಂಡ. ಹಾಗೂ ಓಬಳಾಪುರಂ ಮೈನಿಂಗ್ ಕಂಪನಿಗೆ ಒಂದು ಲಕ್ಷ ರೂ. ದಂಡ.
ಇಷ್ಟಕ್ಕೇ ಖುಷಿ ಪಡೋಣವೇ?
ಸುಕುಮಾರ್ ಎಂ
@smkformedia@gmail.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ