ನಾವು ಜೊತೆಗಿದ್ದೇವೆ,
ಅಗಸ್ಟ್ 08ರಂದು ಆವಿನಹಳ್ಳಿ ಬಳಿ ಅಪಘಾತದಲ್ಲಿ ಮೃತನಾದ ಪಡಬೀಡು ಸಚಿನ್ ಹಾಗೂ ಅಪಘಾತದಲ್ಲಿ ತೀವ್ರ ಗಾಯಗೊಂಡ ಹೆಮಡೆ ಸುಮಂತ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಅವರ ದುಃಖದಲ್ಲಿ ನಾವು ಕೂಡ ಭಾಗಿಯಾದೆವು.
ಅಪಘಾತದಲ್ಲಿ ಗಂಭೀರ ಗಾಯಕ್ಕೊಳಗಾದ ಹೆಮಡೆ ಸುಮಂತ್ ಯೋಗಕ್ಷೇಮ ವಿಚಾರಿಸಿದೆವು. ಗಾಯಾಳು ಸುಮಂತ್ ಕೈ ಮತ್ತು ಕಾಲಿಗೆ ಬಲವಾದ ಏಟಿನಿಂದಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಒಂದು ಹಂತದ ಚಿಕಿತ್ಸೆ ನೀಡಿ ಸುಮಂತ್ ವೈದ್ಯರ ಸೂಚನೆಯಂತೆ ಕೆಲ ತಿಂಗಳುಗಳ ಕಾಲ ಬೆಡ್ ರೆಸ್ಟ್ ನಲ್ಲಿದ್ದಾರೆ.
ಮೃತ ಸಚಿನ್ ಮನೆಗೂ ಕೂಡ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದೆವು. ಬಂಗಾರದಂತ ಮಗನನ್ನ ಕಳೆದುಕೊಂಡು ಈಗಲೂ ದುಃಖದಲ್ಲಿ ಮುಳುಗಿರುವ ಕುಟುಂಬದ ನೋವಿನಲ್ಲಿ ನಾವು ಭಾಗಿಯಾದೆವು.
ಮೃತ ಸಚಿನ್ ಹಾಗು ಗಾಯಾಳು ಸುಮಂತ್ ಕುಟುಂಬಕ್ಕೆ ತುಮರಿ, ಬ್ಯಾಕೋಡು ಭಾಗದ ಕೆಲವೊಂದಿಷ್ಟು ಸಮಾನ ಮನಸ್ಕರಿಂದ ಸಂಗ್ರಹಿಸಿದ ಮೊತ್ತವನ್ನು ಎರಡೂ ಕುಟುಂಬಗಳಿಗೆ ನೀಡಿ, ಮುಂದಿನ ದಿನಗಳಲ್ಲಿಯು ಅವರ ಕುಟುಂಬದ ಜೊತೆ ನಿಲ್ಲುವ ಭರವಸೆ ನೀಡಿದೆವು. ಅಲ್ಲದೆ ಮುಂದಿನದಿನಗಳಲ್ಲಿ ಅಪಘಾತದ ಕೇಸ್ ನಡೆಸಲು ಎರಡೂ ಕುಟುಂಬಗಳ ಪರ ವಕಾಲತ್ತು ವಹಿಸಲು ಯಾವುದೇ ಶುಲ್ಕವಿಲ್ಲದೆ ವಕೀಲರನ್ನು ಒದಗಿಸುವ ಭರವಸೆಯನ್ನು ಕೂಡ ನೀಡಲಾಯ್ತು. ಈ ವೇಳೆ ಗಣೇಶ್ ಹಾರಿಗೆ, ಪ್ರದೀಪ್ ಮಾವಿನಕೈ, ಅರುಣ್ ಕರೂರು, ಸುಕುಮಾರ್, ರಾಘವೇಂದ್ರ , ವೇದಾಂತ್ ಜೊತೆಯಲ್ಲಿದ್ದರು.
ಸುಕುಮಾರ್ ಎಂ
18:08:2024
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ