ಜಗತ್ತಿನ ಜೀವ ಸಂಕುಲಗಳ ಅಪರೂಪದ ಎಂಟು ತಾಣಗಳಲ್ಲಿ ಭಾರತದ ಪಶ್ಚಿಮಘಟ್ಟವೂ ಒಂದು. ಜಗತ್ತಿನ ಜೀವ ವೈವಿಧ್ಯತೆಯ ತೊಟ್ಟಿಲಂತಿರುವ ಪಶ್ಚಿಮಘಟ್ಟತಾಣ, ಇದೀಗ ಅಭಿವೃದ್ದಿಯ ನೆಪದಲ್ಲಿ ಹಲವು ಅನಾಚಾರಗಳಿಗೆ ಮೌನ ಸಾಕ್ಷಿಯಾಗಿ ನಿಂತಿದೆ.
ಶರಾವತಿ ಯೋಜನಾ ಪ್ರದೇಶದಲ್ಲಿ ಹೈ ಅಲರ್ಟ್. "ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟು, ಜಲ ವಿದ್ಯುತ್ ಯೋಜನಾ ಘಟಕದಲ್ಲಿ ಬಿಗಿ ಭದ್ರತೆ" High alert in the project area. Possibility of attack! "Tight security at dam, hydroelectric project unit as a precautionary measure" ◾ ಸುಕುಮಾರ್ ಎಂ ಶಿವಮೊಗ್ಗ: State News. ಭಾರತ ಹಾಗೂ ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್ ನಿಗಮದ (ಕೆಪಿಸಿ) ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಿ ಇರಿಸಲಾಗಿದೆ. ಲಿಂಗನಮಕ್ಕಿ ಅಣೆಕಟ್ಟು, ಲಿಂಗನಮಕ್ಕಿ ಜಲವಿದ್ಯುದಾಗಾರ, ಮಹಾತ್ಮ ಗಾಂಧಿ ಮತ್ತು ಶರಾವತಿ ಜಲವಿದ್ಯುದಾಗಾರಗಳಲ್ಲಿ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೊ ತರಬೇತಿ ಪಡೆದ ಅನುಭವಿ ಸಿಬ್ಬಂದಿ ಭದ್ರತಾ ಕಾರ್ಯಪಡೆಯ ಕಾವಲು ಇದೆ. ಎಲ್ಲ ಭದ್ರತಾ ಸಿಬ್ಬಂದಿ ಶರಾವತಿ ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ಯಾವುದೇ ತುರ್ತು ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಗೆ ಸದಾ ಸಿದ್ಧರಿರಬೇಕು ಎಂಬ ಸಂದೇಶ ನೀಡಿದ್ದಾಗಿ ಯೋಜನಾ ಪ್ರದೇಶದ ಭದ್ರತೆಯ ಹೊಣೆ ಹೊತ್ತಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ಐಎಸ್ಎಫ್) ಇನ್ಸ್ಪೆಕ್ಟರ್ ಬಿ.ವಿ. ಕುಮಾರ್ ಮಾಹಿತಿ ನೀಡಿದ್ದಾರೆ. ಆದರೆ, ಮಾಕ್ ಡ್ರಿಲ್ ತಯಾರಿ ಬಗ್ಗೆ ಯಾವುದೇ ರೀತಿಯ ಆದ...
ಚಂದ್ರಗ್ರಹಣ: ಸಿಗಂದೂರಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಶಿವಮೊಗ್ಗ (ಸಿಗಂದೂರು) ನಾಳೆ ನೆಡೆಯಲಿರುವ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ಸಮೀಪದ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಗ್ರಹಣ ಸಂಬಂಧಿಸಿದ ಯಾವುದೇ ಆಚರಣೆಗಳು ಇರುವುದಿಲ್ಲ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ. ಮಾರ್ಚ್ 14ರಂದು ಕ್ಷೇತ್ರದಲ್ಲಿ ಎಲ್ಲಾ ರೀತಿಯ ಸೇವೆ, ಸಾರ್ವಜನಿಕ ದರ್ಶನ, ಪೂಜಾ ಕೈಂಕರ್ಯಗಳು, ಪ್ರಸಾದ ವಿನಿಯೋಗ ಎಂದಿನಂತೆ ಇರಲಿದೆ. ವಸತಿ ಸೇವೆಗಳಲ್ಲಿ ಸಹ ಯಾವುದೇ ಬದಲಾವಣೆ ಇಲ್ಲ ಎಂದು ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್ ತಿಳಿಸಿದ್ದಾರೆ. @smkformedia@gmail.com
ಯೋಜನಾ ಸಂತ್ರಸ್ತರು ಹಾಗೂ ಭೂ ಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ರಚನೆ ಅಗತ್ಯ: ಸಚಿವ ಎಸ್ ಮಧು ಬಂಗಾರಪ್ಪ. ವರದಿ◾ ಸುಕುಮಾರ್ ಎಂ ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಜಲವಿದ್ಯುತ್ ಯೋಜನೆಗಳು ಹಾಗೂ ನೀರಾವರಿ ಯೋಜನೆಗಳ ಸಂತ್ರಸ್ತರ ಪುನರ್ವಸತಿ, ಭೂಮಿ ಸಮಸ್ಯೆ ಹಾಗೂ ಇತರೆ ಭೂ ಹಕ್ಕಿನ ಸಮಸ್ಯೆಗಳ ಪರಿಹಾರಕ್ಕಾಗಿ ಹಿರಿಯ ಐ.ಎ.ಎಸ್. ಅಧಿಕಾರಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆಯಾಗಬೇಕು ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದರು. ಶರಾವರಿ ಯೋಜನೆ ಮುಳುಗಡೆ ಸಂತ್ರಸ್ತರು ಹಾಗೂ ಪಾರಂಪರಿಕ ಅರಣ್ಯವಾಸಿಗಳ ಬೇಡಿಕೆ ಹಾಗೂ ಸಮಸ್ಯೆಗಳ ಕುರಿತು ಬೆಂಗಳೂರಿನಲ್ಲಿ ಸಂತ್ರಸ್ಥರು ಹಾಗೂ ರೈತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 1978 ಇಸವಿಗಿಂತ ಮೊದಲು ಸಾಗುವಳಿ ಮಾಡುತ್ತಿದ್ದ ರೈತರಿಗೆ 3 ಎಕರೆ ಭೂಮಿ ಸಕ್ರಮಗೊಳಿಸಬೇಕು. ಈ ವಿಷಯದಲ್ಲಿ ಕೈಬಿಟ್ಟಿರುವ ಪ್ರಕರಣಗಳನ್ನು ಪರಿಗಣಿಸಬೇಕು ಎಂದು ಸಚಿವರು ಹೇಳಿದರು. ವಿವಿಧ ಭೂಮಿ ಮಂಜೂರಾತಿ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಅಧಿಸೂಚಿತ ಅರಣ್ಯ ಪ್ರದೇಶದಲ್ಲಿ ಮಂಜೂರು ಮಾಡಲಾದ ರೈತರ ಸಾಗುವಳಿ ಭೂಮಿಗಳನ್ನು ಅರಣ್ಯ ಭೂಮಿ ಎಂದು ಇಂಡೀಕರಣ ಮಾಡುತ್ತಿರುವುದರಿಂದ ಆಗಿರುವ ಸಮಸ್ಯೆಗಳ ಬಗ್ಗೆ ಸಚಿವರು ಅಧಿಕಾರಿಗಳಿಗೆ ಮನವರಿಕೆ ಮಾಡಿ...
♥️
ಪ್ರತ್ಯುತ್ತರಅಳಿಸಿ