◼️"ಪ್ರಜಾವಾಣಿ" ಸಂಪಾದಕೀಯ ಒಂದು ಮಂಥನ


◼️"ಪ್ರಜಾವಾಣಿ" ಸಂಪಾದಕೀಯ ಒಂದು ಮಂಥನ


ಜುಲೈ 27ರ ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕೆ ಓದಿದವರು ಒಂದು ವಿಶೇಷವನ್ನು ಗಮನಿಸಬಹುದು. 


ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ನ  ಪುಟ 5 ರಲ್ಲಿ ಒಂದು ಪೂರ್ಣ ಪುಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ "ಮೂಡಾ ಸೈಟ್ ಹಗರಣ"ದ ಕುರಿತ ಸ್ಪಷ್ಟೀಕರಣ ಫೋಟೋ ಸಹಿತ ಬಂದಿದೆ. ಇದೇ ಪತ್ರಿಕೆಯ ಪುಟ 6 ರಲ್ಲಿ (ಡೆಕ್ಕನ್ ಹೆರಾಲ್ಡ್ ಪುಟ 8)  " ವಿಧಾನಮಂಡಲ: ಚರ್ಚೆಗೆ ನಕಾರ, ಸಮರ್ಥನೀಯ ನಡೆಯಲ್ಲ" (Congress government is wrong to hide behind rules) ಎಂಬ ನೇರ ನುಡಿಗಳ,  ನಿಷ್ಠುರ ಸಂಪಾದಕೀಯ ಪ್ರಕಟವಾಗಿದೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಪುಟ 5 ರಲ್ಲಿ ಬಂದಿರುವ ಸಿದ್ದರಾಮಯ್ಯನವರ ಸುದೀರ್ಘ ಸ್ಪಷ್ಟೀಕರಣ *ಪಿವಿ ಮತ್ತು DH ಬ್ರ್ಯಾಂಡ್ ಸ್ಪಾಟ್* ಪ್ರಸ್ತುತಿ. ಅಂದರೆ ಇಡೀ ಪುಟದ ಜಾಹೀರಾತಿಗೆ ಆಗುವಷ್ಟೇ ಹಣವನ್ನು ಸಿದ್ದರಾಮಯ್ಯ ಅಥವಾ ಅವರ ಕಡೆಯವರು ಎರಡೂ ಪತ್ರಿಕೆಗಳಿಗೆ ಪಾವತಿ ಮಾಡಿದ್ದಾರೆ. ಆಂದರೆ ಇದು ಹಣ ಕೊಟ್ಟು ಹಾಕಿಸಿರುವ ಸುದೀರ್ಘ ಸ್ಪಷ್ಟೀಕರಣ. 

(ಸಿದ್ದರಾಮಯ್ಯ ಅವರ ಶುಕ್ರವಾರದ ಪತ್ರಿಕಾಗೋಷ್ಠಿಯ ವರದಿ ಮುಖಪುಟದಲ್ಲಿ ಸಹಜವಾಗಿ ಎಷ್ಟು ವಿವರ ಬರಬೇಕೋ ಅಷ್ಟು ಬಂದಿದೆ.)

ಆದರೆ ಈ ಸಂಪಾದಕೀಯದಲ್ಲಿ ವಿಧಾನ ಸಭೆಯ ಸ್ಪೀಕರ್ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಚರ್ಚೆಗೆ ನಿರಾಕರಿಸಿದ ನಿರ್ಧಾರವನ್ನು ಕಟುವಾಗಿ ಟೀಕಿಸಲಾಗಿದೆ. 

ಪತ್ರಿಕೆಯೊಂದು ಜಾಹೀರಾತು ಪಡೆದುಕೊಂಡೂ ಅದರ ಹಂಗಿಗೆ ಬೀಳದೆ ತನ್ನ ನಿಲುವನ್ನು ಹೇಗೆ ದಿಟ್ಟವಾಗಿ ಪ್ರಕಟಿಸಬಹುದು ಎನ್ನುವುದಕ್ಕೆ ಇದೊಂದು ಅತ್ಯುತ್ತಮ ಉದಾಹರಣೆ. ಸಿದ್ದರಾಮಯ್ಯನವರು ವಿಧಾನ ಸಭೆ ಮತ್ತು ಪರಿಷತ್ತಿನ ಒಳಗೆಯೇ ತಮ್ಮನ್ನು ಚರ್ಚೆಗೆ ಒಡ್ಡಿಕೊಂಡು ಈ ಎಲ್ಲ ಸ್ಪಷ್ಟೀಕರಣದ ವಿವರಗಳನ್ನೂ ನೀಡಬೇಕಿತ್ತು, ಅದಕ್ಕೆ ಸ್ಪೀಕರ್ ಮತ್ತು ಸಭಾಪತಿಯವರು ಅವಕಾಶ ನೀಡಬೇಕಿತ್ತು ಎನ್ನುವ ಸಂಪಾದಕೀಯ ನಿಲುವು ಸಂಪೂರ್ಣ ಸರಿ ಇದೆ.

ಆದರೆ ಸ್ಪೀಕರ್ ಮತ್ತು ಸಭಾಪತಿಗಳು ಈಗ ಪತ್ರಿಕೆಯ ಸಂಪಾದಕೀಯಕ್ಕೆ ಬಹಿರಂಗವಾಗಿ ಉತ್ತರ ಬರೆಯಬಹುದೆ? "ಹೀಗೆ ಬರೆಯುವುದು ಅವರ ವಿವೇಚನೆಗೆ ಬಿಟ್ಟದ್ದು, ಅದರ ಅಗತ್ಯವಿಲ್ಲ, ನಿಯಮವೇನೂ ಇಲ್ಲ" ಎಂದು ವಾದಿಸಬಹುದು. ಈ ವಾದ  ಕಾನೂನುಬದ್ಧವೂ ಇರಬಹುದು. ಆದರೆ ಇದನ್ನೊಂದು ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಸ್ಪೀಕರ್ ಮತ್ತು ಸಭಾಪತಿಗಳು ಮಾಡಿದರೆ ಅದನ್ನು Beauty Of Democracy ಎನ್ನಬೇಕಾಗುತ್ತದೆ. ತಮ್ಮ ನಿರ್ಧಾರವನ್ನು ಖಾದರ್ ಮತ್ತು ಹೊರಟ್ಟಿಯವರು ಸಾರ್ವಜನಿಕವಾಗಿ ಸಮರ್ಥಿಸಬಹುದೆ? ಬಹುಶಃ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿ ಇದ್ದಿದ್ದರೆ ಇಂತಹ ಸಾರ್ವಜನಿಕ ಚರ್ಚೆಗೆ ಸಿದ್ಧರಾಗಿ ಇರುತ್ತಿದ್ದರು ಅನ್ನಿಸುತ್ತೆ.


ಸುಕುಮಾರ್ ಎಂ

@smkformedia@gmail.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

High alert in Sharavati project area. ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಕಾರಣ ಶರಾವತಿ ಕಣಿವೆ ಯೋಜನಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್‌ ನಿಗಮದ (ಕೆಪಿಸಿ) ಭದ್ರತಾ ವ್ಯವಸ್ಥೆಯನ್ನು ಹೈ ಅಲರ್ಟ್ ಮಾಡಿ ಇರಿಸಲಾಗಿದೆ.

ಚಂದ್ರಗ್ರಹಣ: ಸಿಗಂದೂರಿನಲ್ಲಿ ಯಾವುದೇ ಬದಲಾವಣೆ ಇಲ್ಲ.

ಯೋಜನಾ ಸಂತ್ರಸ್ತರು ಹಾಗೂ ಭೂ ಹಕ್ಕಿನ ಸಮಸ್ಯೆ ನಿವಾರಣೆಗೆ ಟಾಸ್ಕ್ ಫೋರ್ಸ್ ರಚನೆ ಅಗತ್ಯ: ಸಚಿವ ಎಸ್ ಮಧು ಬಂಗಾರಪ್ಪ